knight errant
ನಾಮವಾಚಕ

ನೈಟ್‍ ಎರಂಟ್‍:

  1. ಸಾಹಸ ವೀರ; ಮಧ್ಯಯುಗದಲ್ಲಿ ವಿರೋಚಿತ ಸಾಹಸಗಳನ್ನು ಹುಡುಕಿಕೊಂಡು ಸಂಚರಿಸುತ್ತಿದ್ದ ಸಾಹಸಾನ್ವೇಷಿ ವೀರ.
  2. (ರೂಪಕವಾಗಿ) ನಗೆಗಲಿ; ತಿಕ್ಕಲು ವೀರ; ಹಾಸ್ಯಗಲಿ; ದೀನದಲಿತರನ್ನು ರಕ್ಷಿಸುವ ಮಹೋದ್ದೇಶದಿಂದ ಸಾಹಸಕ್ಕೆ ಸಿಕ್ಕಿಕೊಳ್ಳುವ ತಿಕ್ಕಲು ವ್ಯಕ್ತಿ.
  3. (ರೂಪಕವಾಗಿ) ಸಾಹಸವೀರ; ಸಾಹಸಕಾರ್ಯಗಳಲ್ಲಿ ತೊಡಗುವ ಧೀರ ವ್ಯಕ್ತಿ.